Tuesday, March 26, 2019

ಭರವಸೆ ಎಂಬ ದೇವರು (kavana)

ಭರವಸೇಶ್ವರ  - ಬಿ ಎಸ್ ಜಗದೀಶ ಚಂದ್ರ

ದಿಕ್ಕೇ ತೋಚದಾಗ, ಆಕಾಶವೇ ಕಳಚಿ ಬಿದ್ದಾಗ 
ಸಂಕಟ ಬಂದಾಗ ವೆಂಕಟರಮಣನಂತೆ 
ನಿನಗೆ ನಾನೇ ದಿಕ್ಕು 

ಇಡೀ ಪ್ರಪಂಚವೇ ಇದು ಅಸಾಧ್ಯ, ಬಿಟ್ಟುಬಿಡು ಎಂದಾಗ 
'ಇನ್ನೊಂದೇ ಬಾರಿ'  ಪ್ರಯತ್ನಿಸು ಎಂದು 
ಹುರಿದುಂಬಿಸುವೆ ನಾನು 

ಕೈಲಾಗದು ಎಂದು ಕೈ ಚೆಲ್ಲಿ ಕುಳಿತಾಗ 
'ಯಾಕಾಗದು'  ಎಂದು ಮೈದಡವಿ 
ನಿನ್ನನ್ನು ತಳ್ಳುವವನೇ ನಾನು 

ಗಾಢವಾದ ಕಗ್ಗತ್ತಲು ರಾತ್ರಿಯಿಡಿ ಕವಿದ್ದರೂ 
ಚಂದ್ರನಿಂದ ಬೆಳಗುವುದಿಲ್ಲವೇ? 
ಸೂರ್ಯನಿಂದ ಕರಗುದಿಲ್ಲವೇ? 

ಪವಾಡವೋ, ಮಿಂಚಿನಂತಹ ಉಪಾಯವೋ  
ನಾನೆಂದಿಗೂ ನಿನ್ನೊಂದಿಗಿರುವೆ 
ಸದಾ ನಿನಗೆ ಶುಭ ಕೋರುವೆ 

ಜಗದೀಶ ಚಂದ್ರ ಬಿ ಎಸ್