Thursday, October 26, 2017

ಬಾಲ್ಯದ ಶಾಲೆಯ ಛಾಯಾ ಚಿತ್ರವೊಂದರ ಹಿಂದಿನ ಕತೆ ಮತ್ತು ಜಯನಗರ

ಬಾಲ್ಯದ ಶಾಲೆಯ ಛಾಯಾ ಚಿತ್ರವೊಂದರ ಹಿಂದಿನ ಕತೆ ಮತ್ತು ಜಯನಗರ  
ಬಿ ಎಸ್ ಜಗದೀಶ ಚಂದ್ರ
ನಾವು ಜಯನಗರಕ್ಕೆ ಬಂದದ್ದು ೧೯೬೨ನೆಯ ಇಸವಿಯ ಫೆಬ್ರವರಿ ತಿಂಗಳಲ್ಲಿ ಅಂತೆ. ಅದು ನನಗೆ ಜ್ಞಾಪಕವಿಲ್ಲ ಏಕೆಂದರೆ ಆಗ ನನಗೆ ಕೇವಲ 4 ವರ್ಷ 3 ತಿಂಗಳು. ನನ್ನ ಮನೆಯ ವಿಳಾಸ ೪೪೨, ೩೮ನೇ ಅಡ್ಡ ರಸ್ತೆ, ೯ ಮತ್ತು ೧೦ನೇ ಮೈನ್ ಗಳ  ನಡುವೆ, ೫ನೇ ಬ್ಲಾಕ್. ಈ ಮನೆಗೆ ಬಂದ ಕೂಡಲೇ ನನ್ನನ್ನು ೮ನೇ ಬ್ಲಾಕಿನಲ್ಲಿರುವ ಒಂದು ಸರ್ಕಾರೀ ಶಾಲೆಗೆ ಸೇರಿಸಿದ್ದರು. ಅದು ನಮ್ಮ ಮನೆಯ  ರಸ್ತೆಯಲ್ಲೇ ಅಂದರೆ ೩೮ನೇ ಕ್ರಾಸ್ ನಲ್ಲಿ ಇತ್ತು.  ಅಲ್ಲಿ ನಾನು ಕೆಲವೇ ತಿಂಗಳು ೨ನೇ ತರಗತಿಯಲ್ಲಿ  ಓದಿದೆ. ನಂತರ ನಮ್ಮ ಮನೆಯಿಂದ ಅಂದರೆ ೩೮ನೇ ಕ್ರಾಸ್ ನಿಂದ  ಸ್ವಲ್ಪ ದೂರದಲ್ಲಿ ಕಾಣಿಸುತ್ತಿದ್ದ ಮಾಡೆಲ್ ಎಜುಕೇಷನ್ ಸೊಸೈಟಿ ಶಾಲೆಗೆ ನನ್ನ ಸೇರಿಸಿದರು. ಅಲ್ಲಿ, ವಯಸ್ಸು ಕಡಿಮೆ ಎಂದು ನನ್ನನ್ನು ಮತ್ತೆ ೨ನೇ ತರಗತಿಗೇ  ಸೇರಿಸಿದರು. ಹೀಗೆ ಈ ಶಾಲೆಯಿಂದ ನನ್ನ ಓದಿನ ಪಯಣ ಮುಂದುವರೆಯಿತು.
ಆಗ ನಮ್ಮ ಮನೆಯ ಮುಂದೆ ಯಾವುದೇ ಮನೆಗಳು ಇರಲಿಲ್ಲ.  ಅಂದರೆ ಈಗಿನ ೯, ೯ಎ  ಮತ್ತು ೧೦ನೆಯ ಮೈನ್ ಗಳಲ್ಲಿ. ಅಲ್ಲಲ್ಲಿ ನೀರು ನಿಲ್ಲುತ್ತಿದ್ದು "ಅದನ್ನು ಕುಂಟೆ ಎಂದು ಕರೆಯುತ್ತಾರೆ" ಎಂದು ನನ್ನ ತಂದೆ ತೋರಿಸುತ್ತಿದ್ದರು. ನಮ್ಮ ಮನೆಯಿಂದ ಶಾಲೆಯಲ್ಲಿ ಆಡುವ ಮಕ್ಕಳು, ದೂರದಲ್ಲಿ ೪ನೇ ಬ್ಲಾಕ್ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಬಸ್ಸುಗಳು ಕಾಣಿಸುತ್ತಿದ್ದವು. ಆಗ ನಮ್ಮ ಮನೆಯ ಸುತ್ತ ಬೆರೆಳೆಣಿಸುವಷ್ಟು ಮನೆಗಳು ಮಾತ್ರ ಇದ್ದವು. ಉಳಿದವೆಲ್ಲಾ ಖಾಲಿ ಜಾಗಗಳು.  ಮನೆಯ ಈ ಕಡೆಯ ಪಕ್ಕದಲ್ಲೇ ಈಗಿನ ಶಾಲಿನಿ ಮೈದಾನದ (ಆಗ ಅದು ಗ್ರೀನ್ ಪಿಚ್ ಆಗಿತ್ತು) ಪಕ್ಕಕ್ಕೆ ಒಂದು ದೊಡ್ಡ ಕೆರೆ ಇತ್ತು. ಅದನ್ನು ಮಾರೇನ ಹಳ್ಳಿ ಕೆರೆ ಎಂದು ಕರೆಯುತ್ತಿದ್ದರು. ಈ ಕೆರೆ ಈಗಿನ ೧೧ನೇ ಮೇನ್ ಪಕ್ಕದಲ್ಲೇ ಪ್ರಾರಂಭವಾಗಿ ಸುಮಾರು ರಾಗಿ ಗುಡ್ಡದವರೆಗೂ ಹರಡಿತ್ತು. ಬಹುಷಃ ಈಗಿನ ಶಾಲಿನಿ ಮೈದಾನವೂ ಹಿಂದೆ ಈ ಕೆರೆಗೆ ಸೇರಿತ್ತು ಅನ್ನಿಸುತ್ತದೆ. ಹೀಗಾಗಿ ಅದು ಒಂದು ಹಳ್ಳದಂತೆ ಇದೆ. ಅದರ ಪಕ್ಕದಲ್ಲಿ ಇರುವ ಈಗಿನ ಉದ್ಯಾನವನದ ಜಗದಲ್ಲಿ ಸದಾ ನೀರು ತುಂಬಿ ಕಪ್ಪೆಗಳ ವಟಗುಟ್ಟುವ ಸದ್ದು ಕೇಳಿಸುತ್ತಿತ್ತು. ಹಾಗೆಯೆ ಶಾಲಿನಿ ಹೋಟೆಲ್ ಅಂದರೆ ಈಗಿನ ಅಡಿಯಾರ್ ಆನಂದ ಭವನದ ಪಕ್ಕದ ಉಡುಪಿ ಹೋಟೆಲ್ ಇರುವ ಜಾಗದಲ್ಲೂ ಸದಾ ನೀರು ತುಂಬಿದ್ದು ಕಪ್ಪೆಗಳ ವಾಸಸ್ಥಾನವಾಗಿತ್ತು. ಸಂಜೆಯಾಯಿತೆಂದರೆ ಅವುಗಳ ಸಡ್ಡು ನಮಗೆ ಸಂಜೆಯ ರಾಗವಾಗಿತ್ತು. ಇದರೊಂದಿಗೆ ಸೊಳ್ಳೆಗಳ ಸಾಮ್ರಾಜ್ಯ. ಜಯನಗರಕ್ಕೆ ಸೊಳ್ಳೆಗಳ ನಗರ ಎಂಬ ಅನ್ವರ್ಥ ನಾಮವೂ ಇತ್ತು. ನಾವು ಆಟ ಆಡುತ್ತಿದ್ದರೆ ನಮ್ಮ ಕಪ್ಪನೆಯ ಕೂದಲ ಮೇಲೆ ಸೊಳ್ಳೆಗಳು ಕಿರೀಟದಂತೆ ಕಂಗೊಳಿಸುತ್ತಿದ್ದವು. ನಾವು ಇತರರ ತಲೆಯ ಮೇಲೀನ ಸೊಳ್ಳೆಯ ಕಿರೀಟ ನೋಡಿ ನಕ್ಕರೆ ಅವರು ನಮ್ಮ ತಲೆಯ ಮೇಲಿನ ಕಿರೀಟವನ್ನು ನೋಡಿ ಹಂಗಿಸುತ್ತಿದ್ದರು. ಒಟ್ಟಿನಲ್ಲಿ ಎಲ್ಲರ ತಲೆಮೇಲೆಯೂ ಕಿರೀಟವೇ.
ಈಗ ಆ ಕೆರೆಯ ಮಧ್ಯ ಭಾಗದಲ್ಲಿ 'ರಾಯರ ಮಠ ದಿಂದ ರಾಗಿಗುಡ್ಡಕ್ಕೆ ಹೋಗುವ ರಸ್ತೆ' ನಿರ್ಮಾಣವಾಗಿದೆ. ಮುಖ್ಯವಾದ ಕೆರೆ ಇದ್ದ ಭಾಗದಲ್ಲಿ, ಅಂದು ನೀರಿನಿಂದ ತುಂಬಿ ಹಸಿರಾದ ಗದ್ದೆ, ಕಬ್ಬಿನ ತೋಟಗಳು ಮಾಯವಾಗಿ ಈಗ ಸ್ಲಂ ನಂತೆ ಬೆಳವಣಿಗೆ ಆಗಿದೆ. ಒಳಗೆ ಓಡಾಡುವುದೇ ಕಷ್ಟ. ಜಯನಗರಕ್ಕೂ ಈ ಜಾಗಕ್ಕೂ ಅಜಗಜಾಂತರ.
ಈ ಕೆರೆಯ ಅಂಚಿನಲ್ಲಿ ಅಂದರೆ ಈಗಿರುವ ಜೈನ ಕಾಲೇಜು, ಬಿಗ್ ಬಜಾರ್ ಜಾಗದಲ್ಲಿ ಕಬ್ಬಿನ ತೋಟಗಳಿದ್ದು ಆ ರಸ್ತೆಯುದ್ದಕ್ಕೂ ಅನೇಕ ಆಲೆಮನೆಗಳು ಇದ್ದವು. ನಾವು ಆಲೆಮನೆಗೆ ಹೋಗುತ್ತಿದ್ದ ರಸ್ತೆಯೇ ಈಗ ಜೈನ ಕಾಲೇಜು ಮುಂದಿರುವ ರಸ್ತೆ. ಇಂದಿಗೂ ಹಾಗೇ ಇದೆ ಆದರೆ ಕಬ್ಬಿನ ತೋಟಕ್ಕೆ ಬದಲು ಕಟ್ಟಡಗಳು ತುಂಬಿವೆ. ಹಾಗೆ ನಡೆದು ಹೋದರೆ ರಾಗಿಗುಡ್ಡಕ್ಕೆ ಹೋಗಬಹುದಿತ್ತು. ಅಲ್ಲಿ ಇನ್ನಷ್ಟು ಅಲೆಮೆನೆಗಳು ಇದ್ದವು. ರಾಗಿಗುಡ್ಡದಯಂಚಿನ  ಸುತ್ತಲೂ ತೋಟಗಳು, ಗದ್ದೆಗಳು ಇದ್ದವು. ಈಗ ಕೆರೆ ಅಂಚಿನ ಗದ್ದೆ ಇದ್ದಜಾಗದಲ್ಲಿ ಅಂದರೆ ಜೇಪಿ ನಗರ ಕ್ಲಬ್ ಜಾಗದಲ್ಲಿ ಈಗ ಜೇ ಪಿ ನಗರವಾಗಿದೆ. 
ಈ ಆಲೆಮನೆಗಳಿಗೆ ನಮ್ಮನ್ನು ಶಾಲೆಯಿಂದ ನಡೆಸಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಕೊಡುವ ಬೆಲ್ಲ, ಕಬ್ಬಿನ ಹಾಲಿನ ಆಸೆಗೆ ನಾವು ಸಂತೋಷದಿಂದ ನಡೆದು ಹೋಗುತ್ತಿದ್ದೆವು. ಆಗ ಎಷ್ಟು ದೂರ ಅಂದುಕೊಳ್ಳುತ್ತಿದ್ದೆವು. ಆದರೆ ಈಗ ಇಲ್ಲೇ ಮನೆ ಪಕ್ಕದಲ್ಲಿ ಅನ್ನುತ್ತೇವೆ. ಕಾರಣ ಅಂದಿನ ನಮ್ಮ ವಯಸ್ಸು ಹಾಗೂ ಇಂದಿನ ವಾಹನ ಸೌಕರ್ಯ ಹಾಗೂ ಬೆಂಗಳೂರಿನ ಬೆಳವಣಿಗೆ. 
ನಾವು MES ಶಾಲೆ ಸೇರಿದಾಗ ಅದು ಈಗಿನ ಶಾಲೆಯ ಮುಂದಿರುವ ಒಂದು ಮನೆಯಲ್ಲಿ ಇತ್ತು. ಅದಕ್ಕೆ ಸುತ್ತಲೂ ಇರುವ ಹೊರ ಜಾಗದಲ್ಲಿ ತೆಂಗಿನ ಚಪ್ಪರ ಹಾಕಿ ರೂಮುಗಳನ್ನು ಮಾಡಿದ್ದರು. ಹೈಸ್ಕೂಲು ೩೮ನೇ ಕ್ರಾಸ್, ೧೬ನೇ ಮೇನ್ ನಲ್ಲಿ ಇತ್ತು.
ನಂತರ ಕೆಲವು  ವರ್ಷಗಳ ನಂತರ ಈಗ MES ಶಾಲೆ ಇರುವ ಜಾಗದಲ್ಲಿ ಏಸಿ ಶೀಟ್ ಹಾಕಿ ೫ ರೂಮ್ ಗಳನ್ನು ಕಟ್ಟಿಸಿ  ಹೈಸ್ಕೂಲನ್ನು  ವರ್ಗಾಯಿಸಿದರು. ಅದೇ ಈಗ ದೊಡ್ಡ ಶಾಲೆಯಾಗಿ ಪರಿವರ್ತಿತವಾಗಿದೆ. ನಮಗೆ ಪ್ರಾಥಮಿಕ ಶಾಲೆಯಲ್ಲಿ ಕೂಡಲು ೫ ಜನ ಕೂಡುವಂತ ಮನೆಗಳನ್ನು ಹಾಕಿರುತ್ತಿದ್ದರು. ಮಾಧ್ಯಮಿಕ ಶಾಲೆಗೆ ಬಂದರೆ ಕೇವಲ ಬೆಂಚು. ಪ್ರೌಢ ಶಾಲೆಗೆ ಬಂದರೆ ಬೆಂಚಿನೊಂದಿಗೆ ಬರೆಯುವ ಹಲಗೆ. ಒಂದು ಮನೆಯ ಸಣ್ಣ ಕೊಠಡಿಗಳಲ್ಲೇ ಪಾಠ ಮಾಡುತ್ತಿದ್ದುರಿಂದ ಅದು ನಮಗೆ ಮನೆಯಂತೆಯೇ ಇತ್ತು. ಜೋರಾಗಿ ಮಳೆ ಬಂದರೆ ಹೊರಗೆ ಚಪ್ಪರ ಸೋರುತ್ತಿದ್ದುರಿಂದ ರಜಾ ಸಿಗುತ್ತಿತ್ತು. ನಾವು ಮನೆಗೆ ಹೋಗದೆ ಮಳೆಯಲ್ಲೇ ನೆಂದು ತೊಪ್ಪೆಯಾಗಿ, ಆಟವಾಡಿ ಬಟ್ಟೆಯೆಲ್ಲ ಕೊಳೆ ಮಾಡಿಕೊಂಡು ಹೋಗಿ, ಮನೆಯಲ್ಲಿ ಚೆನ್ನಾಗಿ ಬೈಸಿಕೊಳ್ಳುತ್ತಿದ್ದೆವು. 
ಆಗ ಎಲ್ಲರ ಮನೆಯಿಂದಲೂ ಸುಮಾರು ೪ ಅಥವಾ ೫ ಮಕ್ಕಳು ಇದೆ ಶಾಲೆಯಲ್ಲಿ ಓದುತ್ತಿದ್ದರು. ಹೀಗಾಗಿ ಎಲ್ಲರ ಮನೆಯ್ಲಲೂ ಓಬ್ಬರಲ್ಲ ಒಬ್ಬರು ಸಹಪಾಠಿ ಗಳಿರುತ್ತಿದ್ದರು. ಅಂದರೆ ನನ್ನ ಸಹಪಾಠಿಯ ಅಕ್ಕನೋ ಅಣ್ಣನೋ ನನ್ನ ಅಣ್ಣನ ಜೊತೆಗಾರ. ಹೀಗೆ ಇಡೀ ಮನೆಯವರೆಲ್ಲಾ ಸಹಪಾಠಿಗಳೇ. ಉದಾಹರಣೆಗೆ ನನ್ನ ಮಿತ್ರ ಶ್ರೀಧರನ ಅಕ್ಕ ವತ್ಸಲಾ ನನ್ನ ಅಣ್ಣನ ಸಹಪಾಠಿ, ಅವನ ಅಕ್ಕ ಕೋಕಿಲ ನನ್ನ ಮೂರನೇ ಅಕ್ಕನ ಹಾಗು ಇನ್ನೊಬ್ಬ ಅಕ್ಕ ಮಂಜುಳಾ ನನ್ನ ಎರಡನೇ ಅಕ್ಕನ ಸಹಪಾಠಿ. ಇತ್ತೀಚಿಗೆ ಅವನ ಮನೆಯ ಗೃಹಪ್ರವೇಶಕ್ಕೆ ಹೋಗಿದ್ದಾಗ ಎಲ್ಲರನ್ನು ಅನೇಕ ವರ್ಷಗಳ ನಂತರ ಭೇಟಿ ಮಾಡಿ, ಅವರೆಲ್ಲರೂ ನನ್ನ ಮನೆಯ ಎಲ್ಲರನ್ನು ವಿಚಾರಿಸಿಕೊಂಡರು.  ಇದೆ ರೀತಿ ನನ್ನ ಸಹಪಾಠಿ ಭಾನುಮತಿಯ ಅಣ್ಣ ರವಿಶಂಕರ (ಈಗ ಶ್ರೀ ಶ್ರೀ ಶ್ರೀ) ನನ್ನ ಅಣ್ಣನ ಸಹಪಾಠಿ.
ಆಗ ಮನೆಗಳು ಕಡಿಮೆ ಇದ್ದುದ್ದಿದರಿಂದ ೫ನೇ ಬ್ಲಾಕ್ ನವರು, ಟಿ ಬ್ಲಾಕ್ ನವರು, ೮ನೇ ಬ್ಲಾಕ್ ನವರು, ೪ನೇ ಬ್ಲಾಕ್ ನವರು ಎಲ್ಲರು ಒಂದೇ. ಶಾಲೆ ಈ ಎಲ್ಲ ಬ್ಲಾಕ್ ಗಳ ಮಧ್ಯದಲ್ಲಿ ಇದ್ದುದರಿಂದ ಹೀಗಾಗಿತ್ತು. ಮನೆಗಳೂ ಕಡಿಮೆ ಇದ್ದುದರಿಂದ ದೂರದಲ್ಲಿ ಎಲ್ಲ ಮನೆಗಳೂ ಕಾಣಿಸುತ್ತಿದ್ದವು.
ಆಗ ನಮಗೆ ಆಟಕ್ಕೆ ಬೇಕಾದಷ್ಟು ಖಾಲಿ ನಿವೇಶನಗಳು ಇದ್ದವು. ನಿವೇಶನ ಗುರುತಿಸಲು ನೆಟ್ಟಿದ್ದ ಕಲ್ಲುಗಳೇ ನಮಗೆ ಕ್ರಿಕೆಟ್ ಆಟಕ್ಕೆ ವಿಕೇಟ್ಟುಗಳಾಗಿದ್ದವು. ಶಾಲೆಯಲ್ಲಿ ಆಡುವುದಕ್ಕೆ, ಈಗ ಜಯನಗರ  ದೂರವಾಣಿ ಕೇಂದ್ರ, ಸನಾತನ ಕಲಾಕ್ಷೇತ್ರ, ಶಾರೀರಕ ಶಿಕ್ಷಣ ಕೇಂದ್ರ ಇರುವ ಜಾಗವೇ ಮೈದಾನ. ಅದರ ಪಕ್ಕದ ಮೈದಾನದ ತುಂಬಾ (ಈಗ ಇರುವ ಆಟದ ಮೈದಾನ) ಆಗ ಮುಳ್ಳಿನ ಗಿಡಗಳಿಂದ ಕೂಡಿದ್ದರಿಂದ ಯಾರೂ ಅಲ್ಲಿ ಆಡುತ್ತಿರಲಿಲ್ಲ. ನಾವೆಲ್ಲ ಬರಿಗಾಲಿನಲ್ಲೇ ಫುಟ್ಬಾಲ್ ಆಡುತ್ತಿದ್ದೆವು. ಆಗ ಆಟಕ್ಕೆ ಸಿಗುತ್ತಿದ್ದುದು ಕೇವಲ ಫುಟ್ಬಾಲ್ ಮಾತ್ರ. ಇಲ್ಲವಾದರೆ ಚಿನ್ನಿ ದಾಂಡಲು, ಬುಗುರಿ, ಲಗೋರಿ, ಸೂರ್ಚೆಂಡು, ಗೋಲಿ ಮೊದಲಾದುವು. ಅವುಗಳಿಗೆ ಒಂದು ಸೀಸನ್ ಇರುತ್ತಿತ್ತು. ಮಳೆ ಬಂದರೆ ಒಂದು ಚೂಪಾದ ಕಬ್ಬಿಣದ ರಾಡನ್ನು ನೆಲಕ್ಕೆ ಕಚ್ಚಿಸುವ ಆಟವೂ ಇರುತ್ತಿತ್ತು. ಶಾಲೆಗೆ ನಡೆದು ಕೊಂಡು ಹೋಗುವಾಗ ಗೋಲಿಯೋ, ಚಪ್ಪಟೆ ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ಅದರಿಂದ ಬೆಂಕಿ ಪೊಟ್ಟಣದ ಮೇಲಿನ ಚಿತ್ರವನ್ನು (ಮ್ಯಾಚೆಸ್ ಎಂದು ಕರೆಯುತ್ತಿದ್ದರು) ಗೆಲ್ಲುವ ಆಟವೋ, ಏನಾದರೂ ಒಂದನ್ನು ಆಡುತ್ತ ಹೋಗುತ್ತಿದ್ದೆವು. ಇಂದಿನಂತೆ ಆ ಕೆಲಸ, ಈ ಕೆಲಸ ಎಂದು ಯಾವುದೇ ತಾಪತ್ರಯಗಳು ಇರುತ್ತಿರಲಿಲ್ಲ. ಅಂದು ಎಲ್ಲರೂ ಶ್ರೀಮಂತರಲ್ಲದಿದ್ದರೂ ಸಂತೋಷದಿಂದ ಇರುತ್ತಿದ್ದರು. ನನಗೆ ತಿಳಿದ ಮಟ್ಟಿಗೆ ಎಲ್ಲರ ಮನೆಯಲ್ಲೂ ದುಡ್ಡಿಗೆ ಬರವೇ. ಆದರೆ ಅದಕ್ಕೆ ಯಾರೂ ಕೊರುಗುತ್ತಿರಲಿಲ್ಲ. ಕಷ್ಟಪಟ್ಟುಕೊಂಡು ಐದಾರು ಮಕ್ಕಳನ್ನು ಬೆಳೆಸಿಕೊಂಡು ಸುಖ ಜೀವನ ನಡೆಸುತ್ತಿದ್ದರು. ಒಂದು ಥಾನು ಬಟ್ಟೆ ತಂದು ಎಲ್ಲರಿಗೂ ಅದರಲ್ಲೇ  ಅಂಗಿಗಳನ್ನು ಹೋಲಿಸುವುದು, ಪುಸ್ತಕ, ಹರಿಯದ ಬಟ್ಟೆಗಳನ್ನು ಜೋಪಾನವಾಗಿ ಕಾಪಾಡಿ ಆದನ್ನು ತಂಗಿಗೊ, ತಮ್ಮನಿಗೋ ಕೊಡುವುದು, ಇವೆಲ್ಲ ಸರ್ವೇ ಸಾಮಾನ್ಯವಾಗಿತ್ತು. 
ಇನ್ನು ಎಲ್ಲರ ಮನೆಯಲ್ಲಿ ಸೈಕಲ್ ಇದ್ದೆ ಇರುತ್ತಿತ್ತು. ಸ್ಕೂಟರ್ ಇದ್ದರೆ ಅವರು ಬಹಳ ಶ್ರೀಮಂತರು, ಕಾರು ಇದ್ದರೆ ಅದೊಂದು ಆಶರ್ಯದ ಸಂಗತಿ. ಈ ಸೈಕಲ್ಲಿನ ಹಳೆಯ  ಚಕ್ರವೇ ಎಲ್ಲರಿಗೂ ಆಟದ ವಸ್ತು. ಒಂದು ಕೋಲು ಇಟ್ಟುಕೊಂಡು ಅದನ್ನು ಜೋರಾಗಿ ಓಡಿಸಿಕೊಂಡು ರಸ್ತೆಯಲ್ಲಿ ಸುತ್ತುವುದೇ ಒಂದು ಹೆಚ್ಚುಗಾರಿಕೆಯಾಗಿತ್ತು. ಸ್ಕೂಟರಿನ ಚಕ್ರವನ್ನು ಆಟಕ್ಕೆ ಇಟ್ಟುಕೊಂಡಿರುವನ ತಲೆಯಲ್ಲಿ ಎರಡು ಕೊಂಬು ಇರುತ್ತಿದ್ದವು.
ಈಗ ಜಯನಗರದ ಟಿ ಬ್ಲಾಕಿನ ಪೋಸ್ಟಾಫೀಸು ಇರುವ ಜಾಗದ ಹಿಂಭಾಗದಲ್ಲಿ ತಾಯಪ್ಪನ ಹಳ್ಳಿ ಇತ್ತು (ಅದಕ್ಕೆ ಅದನ್ನು ಜಯನಗರ ಟಿ ಬ್ಲಾಕ್ ಎಂದು ಕರೆಯುವುದು). ಅಲ್ಲಿ ಎಲ್ಲರ ಮನೆಯಲ್ಲೂ ಹಸುಗಳು. ಅವರು ಅವನ್ನು ನಮ್ಮ ಮನೆಗಳ ಮುಂದೆ ಕರೆತಂದು ಅಲ್ಲಿಯೇ ಹಾಲು ಕರೆದು ಕೊಡುತ್ತಿದ್ದರು. ಈಗ ಅಲ್ಲಿ ಹಳ್ಳಿ ಇತ್ತು ಎಂಬುದಕ್ಕೆ ಯಾವ ಕುರುಹೂ ಇಲ್ಲ.
ಅಲ್ಲಿ ಕೆಲವು ಮನೆಗಳಲ್ಲಿ, ಹೊಲದಲ್ಲಿ ಬೆಳೆದ ಬೆಳೆಯನ್ನು ಶೇಖರಿಸಿಡಲು ಹಗೇವು (ನೆಲದಲ್ಲಿ ಒಂದು ಗುಂಡಿ) ಇತ್ತು. ಈಗ ೯ನೇ ಮುಖ್ಯ ರಸ್ತೆಯ ಪೆಟ್ರೋಲ್ ಬಂಕ್ ಇರುವ ಜಾಗದಲ್ಲಿ, ಹಲಸಿನ ಮರದ ಮುಂಭಾಗದಲ್ಲಿ ಒಂದು ಹಗೇವು ರಸ್ತೆಯಲ್ಲೇ ಇತ್ತು. ನಂತರ ಅದನ್ನು ಮುಚ್ಚಿದರು. ಅಲ್ಲಿರುವ ಹಲಸಿನ ಮರ ೬೨ನೇ ಇಸವಿಗಿಂತಲೂ ಮುಂಚಿನಿಂದಲೂ ಇದೆ. ಅಲ್ಲಿಯೇ ಕೆಲವು ತೇಗದ ಮರಗಳು ಇದ್ದವು. ಇತ್ತೀಚಿಗೆ ಅದು ಇದ್ದ ಮನೆಯವರು ಅದನ್ನು ಕಡಿಸಿದ್ದಾರೆ. ಹಾಗೆಯೆ ಸ್ವಲ್ಪ ಮುಂದೆ ಹೋದರೆ ಅಲ್ಲಿ ಒಂದು ದೊಡ್ಡ ಮೆಟ್ಟಲಿನ ಭಾವಿ ಇತ್ತು.  ಅದು ಈಗಲೂ ಇದ್ದು ಅದನ್ನು ಭಾವಿ ಪಾರ್ಕ್ ಎಂದು ಕರೆಯುತ್ತಾರೆ. ಅದು ಹಿಂದೆ ತೋಟಗಳ ನೀರಾವರಿಗೆ ಉಪಯೋಗವಾದರೆ, ನಂತರ ಗಣೇಶನ ಮುಳುಗಡೆಗೆ ಉಪಯೋಗವಾಗುತ್ತಿತ್ತು. ಈಗ ಅದು ಒಂದು ಐತಿಹಾಸಿಕ ಸ್ಮಾರಕದಂತೆ ಆ ಪಾರ್ಕಿನಲ್ಲಿ ಇದೆ.
ಈ ಕೆಳಗಿನ ಚಿತ್ರ ತೆಗೆದ್ದದ್ದು ನಾವು ೩ನೇ ತರಗತಿಯಲ್ಲಿ ಇದ್ದಾಗ. ಬಹುಷಃ ೧೯೬೩ನೇ ಇಸವಿಯಲ್ಲಿ. ನಮ್ಮ ಟೀಚರ್ ನ ಹೆಸರು ಶಾರದಾ ಮೇಡಂ ಎಂದು. ಹಿನ್ನೆಲೆಯಲ್ಲಿ ಇರುವ ಮನೆಯೇ ನಮ್ಮ ಶಾಲೆಯಾಗಿತ್ತು.
ಕೆಳಗೆ ನೆಲದಮೇಲೆ ಕುಳಿತವರು  (ಎಡದಿಂದ)  -  ಹರ್ಷಕುಮಾರ್ (ಎಸ್ಕಾರ್ಟ್ಸ್), ಜಗದೀಶ ಚಂದ್ರ (ದಯಾನಂದ ಸಾಗರ್ ಕಾಲೇಜು), ಶ್ರೀಧರ (ಎಚ್ ಏ ಎಲ್),  ನರಸಿಂಹ ಪ್ರಸಾದ್, ಪದ್ಮಿನಿ (ಮಾಂಟ್ರಿಯಲ್) ಹಾಗು ಭಾನುಮತಿ (ಶ್ರೀ ಶ್ರೀ ರವಿಶಂಕರ್ ಅವರ ತಂಗಿ). ನಂತರ ನಟರಾಜ (?), ರಾಮಚಂದ್ರ (ನಮ್ಮ ಶಾಲೆಯ ಆಯಾ ಮುನಿಯಮ್ಮನ ಮಗ) ಮತ್ತು ಇನ್ನೊಬ್ಬ ರಾಮಚಂದ್ರ ಇದು ನನ್ನ ನೆನಪು. 
ಟೀಚರ್ ಜೊತೆ ಕುಳಿತವರು (ಎಡದಿಂದ) - ಭಾಗ್ಯ, ಪದ್ಮಾಸಿನಿ (ಜಯನಗರ ದೂರವಾಣಿ ಕೇಂದ್ರ), ಗೀತಾಬಾಲಿ(?) , ಪ್ರೇಮ, ಜಯಂತಿ(?), ಎಚ್ ಏನ್ ಶ್ರೀನಿವಾಸ್ (ಡಾಕ್ಟರ್, ಅಮೇರಿಕ), ವಿಜಯಕುಮಾರ್ (ಕರ್ನಾಟಕಬ್ಯಾಂಕ್), ದಿ/ನಾರಾಯಣ (ಈಗ ಇಲ್ಲ) ಮತ್ತು ವಿಜಯಣ್ಣ (?)
ನಿಂತವರು - ಬಲಬದಿಯಿಂದ ರಾಜಣ್ಣ, ಶ್ರೀವತ್ಸ (ಟಾಟಾ ಇನ್ಸ್ಟಿಟ್ಯೂಟ್ ) ಇವರಲ್ಲದೆ ಮೀನಾ(?), ರುಕ್ಮಿಣಿ, ಶಚೀದೇವಿ, ಶ್ರೀನಿವಾಸ ಸಿರ್ಸಿ, ಸುಬ್ಬ, ಶ್ಯಾಮ, ಕೃಷ್ಣವೇಣಿ, ಮಂಜುಳಾ, ಶ್ರೀಧರ ಸವಣೂರ್(?) ಮತ್ತು ನಾಗರಾಜ(?) ಎಂದು ನನ್ನ ನೆನಪು. 
ನಮ್ಮ ಮುಖ್ಯ ಅಧ್ಯಾಪಕರು ಶ್ರೀಯುತ ಸುಬ್ಬರಾಯರು. ಬಹಳ ಹಿರಿಯರು. ಕಚ್ಚೆ ಪಂಚೆ, ಕೋಟು, ಟೋಪಿ ಅವರ ದಿರಿಸು.  ನನ್ನ ತಂದೆಗೆ ಬಹಳ ಪರಿಚಿತರು. ಬಹಳ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ಅಷ್ಟೇ ಕಟ್ಟುನಿಟ್ಟು. ನಾನು ಈ ಶಾಲೆ ಬಿಟ್ಟು ನ್ಯಾಷನಲ್ ಹೈ ಸ್ಕೂಲ್ ಸೇರಿದಾಗ ಅವರು ನನ್ನನ್ನು, ನನ್ನ ಅಣ್ಣನನ್ನು ಕರೆದು ಈ ಫೋಟೋಗಳನ್ನು ಕೊಟ್ಟರು. ಕೊಡುವಾಗ ತಮ್ಮ ಹಸ್ತಾಕ್ಷರವನ್ನೂ ಹಾಕಿ ಕೊಟ್ಟರು. ಹೀಗೆ ನನ್ನ ಅಣ್ಣ ೫ನೇ ತರಗತಿಯಲ್ಲಿ ಇದ್ದಾಗ ತೆಗೆದ ಫೋಟೋ ಸಹ ಇದೆ.  
ಇನ್ನು ವಿಜಯಲಕ್ಷ್ಮಿ ನಮ್ಮ ಕ್ಲಾಸ್ ಟೀಚರ್ ಆಗಿದ್ದರು. ಬಹಳ ಒಳ್ಳೆಯ ಮೇಡಂ. ನಮಗೆಲ್ಲ ಬಹಳ ಉತ್ತೇಜನ ನೀಡಿ ಮುಂದೆ ಓದಲು ನೆರವಾದರು. ಶಾಂತಾ, ಶಾರದಾ, ನಾಗಲಕ್ಷ್ಮಿ ಹರಿಹರೇಶ್ವರ, ವಿಮಲಾ, ಕೆಂಪುಕಲ್ಲಪ್ಪ ಮೊದಲಾದವರಿದ್ದರು. ಆಗ ಎಲ್ಲ ಪಾಠಗಳನ್ನೂ  ಒಬ್ಬರೋ ಇಲ್ಲವೇ ಇಬ್ಬರು ಮಾತ್ರ ತೆಗೆದುಕೊಳ್ಳುತ್ತಿದ್ದುರಿಂದ, ಅನೇಕರು ಕೆಲವು  ವರ್ಷವಿದ್ದು ಬಿಟ್ಟು ಬಿಡುತ್ತಿದ್ದರಿಂದ ಈಗ ಎಲ್ಲರೂ ನೆನಪಿಲ್ಲ. ಶಾಂತ ಟೀಚರ್ ನಮಗೆ ೨ ರಿಂದ ೪ನೆಯ ತರಗತಿವರೆಗೆ ಪಾಠ ಮಾಡುತ್ತಿದ್ದರು. ಅವರನ್ನು ಒಮ್ಮೆ ನಮ್ಮ ಮಿತ್ರನೊಬ್ಬ "ಕುಳ್ಳಿ ಶಾಂತ" ಎಂದು ಕರೆದು ಬಿಟ್ಟಿದ್ದ. ಅದು ಅವರಿಗೆ ಗೊತ್ತಾಗಿ ಕರೆದು ಚೆನ್ನಾಗಿ ಬೈದಿದ್ದರು. ಅವರು ನಮಗೆಲ್ಲ ಹಾಡು, ನಾಟಕ, ನೃತ್ಯ ಮೊದಲಾದುವುಗಳನ್ನು ಹೇಳಿಕೊಟ್ಟಿದ್ದರು. ಸ್ಕೂಲ್ ಡೇ ದಿನ ಅವನ್ನೆಲ್ಲ  ಜನರೆದುರಿಗೆ ಹಾಡಿ, ಅಡಿ, ಮಾಡಿ ತೋರಿಸಿದಾಗ ನಮಗೆಲ್ಲ ಸಂಭ್ರಮವೋ ಸಂಭ್ರಮ. ಅಂದಿನ ನಾಟಕಗಳನ್ನು ಆಡಿಸುವಾಗ ಮಾಡುವ ರಿಹರ್ಸಲ್ ಅನ್ನು ನೋಡಿ, ನೋಡಿ, ಕೇಳಿ ಕೇಳಿ ಎಲ್ಲ ಸಂಭಾಷಣೆಗಳು ಎಲ್ಲರಿಗೂ ಬಂದುಬಿಟ್ಟಿರುತ್ತಿತ್ತು. ಹಾಗೆಯೇ ನೃತ್ಯ. ಭಾಗವಹಿಸುವರಿಗಿಂತ ಭಾಗವಹಿಸದಿದ್ದವರೇ ಹೆಚ್ಚು ನರ್ತಿಸಿ ಸಂತೋಷ ಪಡುತ್ತಿದ್ದರು. ಹಾಡುವುದಂತೂ ಕೇಳುವುದೇ ಬೇಡ. ಎಲ್ಲರೂ ಕೂಡಿ ಹಾಡುವಾಗ ಎಳೆದೆಳೆದು ಹೇಳುತ್ತಿದ್ದರು. ಒಂದು ಹಾಡು "ರಕ್ಷಿಸು ಕರ್ನಾಟಕದೇವಿ ಸಂರಕ್ಷಿಸು ಕರ್ನಾಟಕ ದೇವಿ" ಎಂಬ ಹಾಡನ್ನು ಎಳೆದು ಹೇಳುವಾಗ "ರಾಕ್ಷಿಸು" ಎಂದಾಗಿ ನಾವೆಲ್ಲ ಅದನ್ನು ರಾಕ್ಷಸಿ ಅಂದುಕೊಂಡುಬಿಟ್ಟಿದ್ದೆವು. ಏಕೆಂದರೆ ಆಗ ನಮಗೆ "ರಕ್ಷಿಸು" ಎಂಬ ಪದಕ್ಕಿಂತ "ರಾಕ್ಷಸಿ" ಎಂಬ ಪದ ಹೆಚ್ಚು ಪರಿಚಯವಿತ್ತು (ರಾಮಾಯಣ ಮತ್ತು ಮಹಾಭಾರತದ ಕತೆ ಕೇಳಿ ಕೇಳಿ). ನಾನು ಅದನ್ನು ಮನೆಯಲ್ಲಿ 'ರಾಕ್ಷಸಿ ಕರ್ನಾಟಕದೇವಿ, ಸಂರಾಕ್ಷಸಿ ಕರ್ನಾಟಕ ದೇವಿ" ಎಂದು ಹೇಳಿ ಚೆನ್ನಾಗಿ ಬೈಸಿಕೊಂಡು ಅತ್ತು ನಂತರ ಬುದ್ಧಿವಾದ ಹೇಳಿಸಿಕೊಂಡು, ಅದರ ಅರ್ಥವನ್ನು ತಿಳಿದುಕೊಂಡಿದ್ದೆ. ಈಗಲೂ ಮಕ್ಕಳು ಒಟ್ಟಾಗಿ ಕೂಡಿ ಹೇಳುವ ಹಾಡುಗಳನ್ನು ಕೇಳುವಾಗಲೆಲ್ಲಾ ನನಗೆ ಈ ನೆನಪು ಮರುಕಳಿಸುವುದು. "ಗಂಗಾ ಜಮುನಾ" ಎಂಬ ಹಿಂದಿ ಚಿತ್ರದಲ್ಲಿ ಹೇಮಂತ್ ಕುಮಾರ್ ಮತ್ತು ಮಕ್ಕಳು ಹಾಡಿರುವ "ಇನ್ಸಾಫ್ ಕಿ ಡಗರ್ ಪೇ " ಎಂಬ ಒಂದು ಅತಿಮಧುರವಾದ ದೇಶ ಭಕ್ತಿ ಗೀತೆಯೊಂದಿದೆ. ಆ ಹಾಡು, ಅದರ ಹಿನ್ನೆಲೆ, ಹಾಡುವ ಮಕ್ಕಳ ತಲ್ಲೀನತೆ ಇವನ್ನೆಲ್ಲ ನೋಡಿದಾಗ ಮನ ತುಂಬಿ ಬಂದು ನನಗೆ ನನ್ನ ಬಾಲ್ಯದ ನೆನಪು ಮರುಕಳಿಸುತ್ತದೆ. ಅದರಲ್ಲಿನ ಒಂದು ಹುಡುಗಿ ಅರುಣಾ ಇರಾನಿ ಎಂದು ಯಾರೋ ಹೇಳಿದ ನೆನಪು. ಇದೆ ರೀತಿ ಕನ್ನಡದ "ಗಾಂಧಿನಗರ" ಎಂಬ ಚಿತ್ರದ "ರಘುಪತಿ ರಾಘವ ರಾಜಾರಾಮ್" ಎಂಬ ಹಾಡು, ಪಿ ಬಿ ಶ್ರೀನಿವಾಸ್, ಜಾನಕಿ ಮತ್ತು ಸಂಗಡಿಗರು (ಮಕ್ಕಳು) ಹೇಳಿದ್ದಾರೆ. ಅದರಲ್ಲಿ ಒಂದು ಮಗು ಸೀತಾ  ರಾ ಆ ಆ ಆ ಮ್ ಎಂದು ಎಳೆದು ಹೇಳುವುದನ್ನು ಕೇಳಿದಾಗಲೂ ಅಷ್ಟೇ. ಸಾಧ್ಯವಾದರೆ ಈ ಹಾಡುಗಳನ್ನು ಯು ಟ್ಯೂಬ್ ನಲ್ಲಿ ಮರೆಯದೇ ಕೇಳಿ. 
ಹಾಗೆಯೇ ಹಿಂದಿ ಚಿತ್ರವೊಂದರ "ದರುಶನ ದೋ ಘನಶ್ಯಾಮ್ ನಾಚ್ ಮೊರೆ" ಎಂಬ ಹಾಡೊಂದಿದೆ. ಹೇಮಂತ್ ಕುಮಾರ್, ಮನ್ನಾಡೆ ಮತ್ತು ಸುಧಾಮಲ್ಹೋತ್ರಾ ಹಾಡಿದ್ದಾರೆ. ಕೇದಾರ್ ರಾಗದಲ್ಲಿದೆ. ಬಹಳ ಮಧುರವಾದ ಹಾಡು. ಇಂದಿಗೂ ಅದನ್ನು ಕೀಬೋರ್ಡ್ ನಲ್ಲಿ ನುಡಿಸುವುದೆಂದರೆ ನನಗೆ ಬಲು ಪ್ರಿಯ. ಆ ಹಾಡಿಗೆ ನಾಟ್ಯ ಮಾಡುತ್ತೇವೆ ಎಂದು ಪ್ರೇಮ, ಪದ್ಮ, ಪದ್ಮಿನಿ ಮೊದಲಾದವರು ಹೊರಗೆ ಮಣ್ಣಿನ ನೆಲೆ ಮಾಡಿ ಮಂಡಿಯೂರಿ ಕುಳಿತು ಏನೋ ಮಾಡಲು ಹೋಗಿ ಕಲ್ಲುಗಳು ಒತ್ತಿ ರಕ್ತ ಬಂದು ಅವರ ನೃತ್ಯ ಅಳುವಿನಲ್ಲಿ ಮುಕ್ತಾಯವಾಗಿದ್ದು ಇಂದಿಗೂ ನೆನಪಿದೆ. ಆ ಹಾಡು ಕೇಳಿದಾಗ ನನಗೆ ಇಂತಹ  ನೆನಪುಗಳು ಮರುಕಳಿಸುತ್ತವೆ. 
ಈಗ ನಾನಿರುವ ದಯಾನಂದ ಸಾಗರ ಕಾಲೇಜಿನ ನನ್ನ ಕೊಠಡಿಯ ಪಕ್ಕದಲ್ಲೇ ಒಂದು ಮಕ್ಕಳ ಶಾಲೆ ಇದೆ. ಅವು ಹೇಳುವ ಹಾಡು, ಮಗ್ಗಿ ಮೊದಲುದುವನ್ನು ಕೇಳಿದಾಗ ನನಗೆ ಇವೇ ನೆನಪುಗಳು. ಒಮ್ಮೆ ಅಲ್ಲಿ ಹೋಗಿ ಅವರೆಲ್ಲರ ಆಟಪಾಠಗಳನ್ನು ನೋಡಲೇ ಎಂದು ಮನಸು ಕಾತರಿಸುತ್ತದೆ. 
ನಾನು ಒಮ್ಮೆ ಒಂದು ಸಲ ಸ್ಲೇಟಿನ ಮೇಲೆ ಒಂದು ಚಿತ್ರ ಬರೆದಿದ್ದೆ. ಅದೊಂದು ಹೆಚ್ಚುಗಾರಿಕೆ ಎಂದು ನನಗೆ ಗೊತ್ತೇ ಇರಲಿಲ್ಲ. ನಂತರ ಶಾಂತ ಟೀಚರ್ ಅದನ್ನು ನೋಡಿ ನನ್ನನ್ನು ಕರೆದರು. ನಾನೇನೋ ತಪ್ಪು ಮಾಡಿದೆ ಎಂದು ಆಗ ಬಹಳ ಹೆದರಿ ಬಿಟ್ಟಿದ್ದೆ. ನಂತರ ಅವರು ಎಲ್ಲಾ ತರಗತಿಗಳಿಗೂ ಕರೆದುಕೊಂಡು ಹೋಗಿ ಆ ಚಿತ್ರವನ್ನು ತೋರಿಸಿದ್ದರು.  ನನಗೋ ಹೆದರಿಕೆ, ನಾಚಿಕೆ. ಹೆಸರನ್ನು ಬರೆದುಕೊಂಡು ನಿಲ್ಲುವ ಖೈದಿಯಂತೆ ತಲೆ ತಗ್ಗಿಸಿ ಎಲ್ಲರಿಗೂ  ತೋರಿಸಿದ್ದೆ. ನಾನು ಚಿತ್ರ ಬರೆದುದದಕ್ಕೆ ಇದೊಂದು ಶಿಕ್ಷೆ ಎಂದುಕೊಂಡು ಬಿಟ್ಟಿದ್ದೆ. ಅದು ನನಗೆ ಇಂದಿಗೂ ನೆನಪಿದೆ. ನಂತರ ಸರಳಾ ದೇವಿ ಶಾಲೆಯಲ್ಲಿ ಉದಯರವಿ ಕಲಾಕೇಂದ್ರ ದವರು ನಡೆಸಿದ ಚಿತ್ರಸ್ಫರ್ಧೆಗೆ ಕಳಿಸಿದ್ದರು. ನನಗೆ ಅದರಲ್ಲಿ ಒಂದು ಪದಕ ಬಂದಿತ್ತು. ಹಾಗೆಯೆ ಹಾಡುಗಳಿಗೆ, ನಾಟಕಗಳಿಗೆ ನಮ್ಮನೆಲ್ಲ ಸೇರಿಸಿಕೊಂಡು ನಮ್ಮ ಸರ್ವತೋಮುಖ ಬೆಳವಣಿಗೆಗೆ ಈ ಎಲ್ಲಾ ಅಧ್ಯಾಪಕರೂ ಕಾರಣರಾಗಿದ್ದಾರೆ. 
ಒಂದು ಒಳ್ಳೆಯ ಸಂಗತಿ ಎಂದರೆ ಅಂದಿನ ಸಹಪಾಠಿಗಳು ಇಂದಿಗೂ ನನ್ನ ಮಿತ್ರರಾಗಿದ್ದಾರೆ. ಅವರೊಂದಿಗೆ ಈಗಲೂ ಒಡನಾಟವಿದೆ. ಒಟ್ಟಿನಲ್ಲಿ ಅಂದಿನ ನೆನಪೇ ಮನಸ್ಸನ್ನು ಹಗುರ ಮಾಡಿ ನಮ್ಮನ್ನು ೫೦ ವರ್ಷ ಚಿಕ್ಕವರನ್ನಾಗಿ ಮಾಡುತ್ತದೆ. ನಿರ್ಮಲ ಮನಸ್ಸಿನ ಮಕ್ಕಳಾಗಿ, ಯಾವುದೇ ಜಾತಿ ಭೇದವಿಲ್ಲದೆ ನಾವು ಅಂದು ಎಷ್ಟೊಂದು ಸಂತೋಷದಿಂದ ಇದ್ದೆವು ಅನ್ನಿಸುತ್ತದೆ. "ಕೊಯಿ ಲೌಟಾದ್ ಮೇರೇ ಬೀತೆ ಹುಯೇ ದೀನ್" ಅಂದರೆ "ನನ್ನ ಕಳೆದು ಹೋದ (ಬಾಲ್ಯದ?) ದಿನಗಳನ್ನು ಯಾರಾದರೂ ಮತ್ತೆ ವಾಪಸ್ಸು ಕೊಡಿಸಿ" ಎಂದರ್ಥ ಬರುವ ಕಿಶೋರ್ ಕುಮಾರ್ ಹೇಳಿರುವ ಹಾಡು ಕಿವಿಯಲ್ಲಿ ಗುನುಗುನಿಸುತ್ತದೆ. 

ಬರೆದವರು - ಜಗದೀಶ ಚಂದ್ರ 



ಈಮೇಲಿನ  ಚಿತ್ರ ತೆಗೆದ್ದದ್ದು ನಾವು ೩ನೇ ತರಗತಿಯಲ್ಲಿ ಇದ್ದಾಗ. ಬಹುಷಃ ೧೯೬೩ನೇ ಇಸವಿಯಲ್ಲಿ. ನಮ್ಮ ಟೀಚರ್ ನ ಹೆಸರು ಶಾರದಾ ಮೇಡಂ ಎಂದು. ಹಿನ್ನೆಲೆಯಲ್ಲಿ ಇರುವ ಮನೆಯೇ ನಮ್ಮ ಶಾಲೆಯಾಗಿತ್ತು.
ಕೆಳಗೆ ನೆಲದಮೇಲೆ ಕುಳಿತವರು  (ಎಡದಿಂದ)  -  ಹರ್ಷಕುಮಾರ್ (ಎಸ್ಕಾರ್ಟ್ಸ್), ಜಗದೀಶ ಚಂದ್ರ (ದಯಾನಂದ ಸಾಗರ್ ಕಾಲೇಜು), ಶ್ರೀಧರ (ಎಚ್ ಏ ಎಲ್ ),  ನರಸಿಂಹ ಪ್ರಸಾದ್, ಪದ್ಮಿನಿ (ಮಾಂಟ್ರಿಯಲ್) ಹಾಗು ಭಾನುಮತಿ (ಶ್ರೀ ಶ್ರೀ ರವಿಶಂಕರ್ ಅವರ ತಂಗಿ). ನಂತರ ನಟರಾಜ (?), ರಾಮಚಂದ್ರ (ನಮ್ಮ ಶಾಲೆಯ ಆಯಾ ಮುನಿಯಮ್ಮನ ಮಗ) ಮತ್ತು ಇನ್ನೊಬ್ಬ ರಾಮಚಂದ್ರ ಇದು ನನ್ನ ನೆನಪು. 
ಟೀಚರ್ ಜೊತೆ ಕುಳಿತವರು (ಎಡದಿಂದ) - ಭಾಗ್ಯ, ಪದ್ಮಾಸಿನಿ (ಜಯನಗರ ದೂರವಾಣಿ ಕೇಂದ್ರ), ಗೀತಾಬಾಲಿ(?) , ಪ್ರೇಮ, ಜಯಂತಿ(?), ಎಚ್ ಏನ್ ಶ್ರೀನಿವಾಸ್ (ಡಾಕ್ಟರ್, ಅಮೇರಿಕ), ವಿಜಯಕುಮಾರ್ (ಕರ್ನಾಟಕಬ್ಯಾಂಕ್), ದಿ/ನಾರಾಯಣ (ಈಗ ಇಲ್ಲ) ಮತ್ತು ವಿಜಯಣ್ಣ (?)
ನಿಂತವರು - ಬಲಬದಿಯಿಂದ ರಾಜಣ್ಣ, ಶ್ರೀವತ್ಸ (ಟಾಟಾ ಇನ್ಸ್ಟಿಟ್ಯೂಟ್ ) ಇವರಲ್ಲದೆ ಮೀನಾ(?), ರುಕ್ಮಿಣಿ, ಶಚೀದೇವಿ, ಶ್ರೀನಿವಾಸ ಸಿರ್ಸಿ, ಸುಬ್ಬ, ಶ್ಯಾಮ, ಕೃಷ್ಣವೇಣಿ, ಮಂಜುಳಾ, ಶ್ರೀಧರ ಸವಣೂರ್(?) ಮತ್ತು ನಾಗರಾಜ(?) ಎಂದು ನನ್ನ ನೆನಪು. 

Sunday, October 22, 2017

ನನ್ನ ಕಲೆ, ನನ್ನ ಬರೆಹ - ಎಲೆ ಮರೆಯ ಹೂವುಗಳು

ನನ್ನ ಕಲೆ, ನನ್ನ ಬರೆಹ - ಎಲೆ ಮರೆಯ ಹೂವುಗಳು - ಬಿ ಎಸ್ ಜಗದೀಶ ಚಂದ್ರ
ಎಲೆ ಮರೆಯ ಕಾಯಿ, ಎಲೆ ಮರೆಯ ಹೂವು ಇವು ಕನ್ನಡದಲ್ಲಿ ನಾವು ಆಗಾಗ್ಗೆ ಉಪಯೋಗಿಸುವ ನುಡಿಗಟ್ಟು. ಸುಂದರವಾದ ಕೆಲವು ಹೂವುಗಳು ಎಳೆಯ ಹಿಂದೆ ಹೀಗೇ ಮರೆಯಾಗಿ ಇದ್ದುಬಿಡುತ್ತವೆ. ಯಾರಾದರೂ ಗಮನಿಸಿ ಅವನ್ನು ಮುಂದೆ ತಂದರೆ ಅವುಗಳ ಸೌಂದರ್ಯವನ್ನು ಎಲ್ಲರೂ ಸವಿಯಬಹುದು. ನಮ್ಮಲ್ಲಿಯೂ ಹೀಗೆಯೇ ಅದೆಷ್ಟು ಜನರಿದ್ದಾರೋ. ಅವರನ್ನು ಗುರುತಿಸಬೇಕು, ಅವರನ್ನು ಮುಂದೆ ಬರಲು ಪ್ರೋತ್ಸಾಹಿಸಬೇಕು.
ಎಲೆಗಳ ಹಿಂದೆ ಮರೆಯಾಗಿರುವ ಸುಂದರವಾದ ಹೂವುಗಳು 

Friday, October 20, 2017

ನನ್ನ ಕಲೆ ನನ್ನ ಬರಹ - ಥಳ ಥಳಿಸುವ ಉಜ್ವಲ ಬಣ್ಣದ ಬೆಳಕಿನ ಚಿತ್ತಾರ

ನನ್ನ ಕಲೆ ನನ್ನ ಬರಹ 

ಥಳ ಥಳಿಸುವ ಉಜ್ವಲ ಬಣ್ಣದ ಬೆಳಕಿನ ಚಿತ್ತಾರ - ಬಿ ಎಸ್ ಜಗದೀಶ ಚಂದ್ರ

ನಿಮಗೇನಾದರೂ ಸೋಮವಾರವೊಂದನ್ನು ಕೊಟ್ಟರೆ ಸುಮ್ಮನೆ ಬಿಡಬೇಡಿ, ಅದನ್ನು ಥಳ ಥಳಿಸುವ ಉಜ್ವಲ ಬಣ್ಣದಲ್ಲಿ ಅದ್ದಿ ವಾರವಿಡೀ ಝಗಮಗಿಸುವಂತೆ ಮಾಡಿಬಿಡಿ. ಅಷ್ಟೇ ಅಲ್ಲ ನೀವು ಹೋದಲ್ಲೆಲ್ಲಾ ಉಜ್ವಲ ಬಣ್ಣದ ಚಿತ್ತಾರವನ್ನು ಮೂಡಿಸಿ. ಯಾರೂ ನಿಮ್ಮ ಈ ಉಜ್ವಲ ಬಣ್ಣದ ಚಿತ್ತಾರವನ್ನು ಅಳಿಸದಂತೆ, ಕೆಡಿಸದಂತೆ ನೋಡಿಕೊಳ್ಳಿ. ಈ ಝಗಮಗಿಸುವ ಚಿತ್ತಾರವನ್ನು ಕಣ್ಣಿಂದ ನೋಡಿ ಸವಿಯೋಣ, ಕಿವಿಗೆ ವಿಶ್ರಾಂತಿ ಇರಲಿ. ದೀಪಾವಳಿಯ ಹಬ್ಬದಂದು ಇದನ್ನು ಮರೆಯಬೇಡಿ. 
ಝಗಮಗಿಸುವ ಬಣ್ಣದ ಚಿತ್ತಾರ ಕಣ್ಣಿಗೆ ಹಬ್ಬವಾಗಲಿ, ಕಿವಿಗೆ ವಿಶ್ರಾಂತಿ ನೀಡಲಿ 
ಶ್ರೀ ಮೂಕಾಂಬಿಕಾ ಸ್ತುತಿ                 ಹಂಸಧ್ವನಿ ರಾಗ,               ಖಂಡಛಾಪು ತಾಳ
ರಚನೆ - ದಿ|| ಸುಂದರರಾಯರು (ವನವಿಹಾರಿ)
ರಾಗ ಸಂಯೋಜನೆ - ದಿ|| ರತ್ನಮ್ಮ ಸುಂದರರಾವ್,         ಸ್ವರ ಪ್ರಸ್ತಾರ ವಿದುಷಿ ಸರಸ್ವತಿ ವಿ ರಾವ್
ಸಾ ನಿ
ರಿ
ರಿ ಸಾ ರಿ
ಗಾ
ನೀ ಡೆ ಗೆ
ನ್ಮತಿಯ
ಮೂ ಕಾಂ ಬಿ
ಕೇ |
ಗಾ ನಿ
ನಿಪಾ ನಿಸರೀರೀ
ರಿ ನಿ
ನಿನಿ ಸಸರಿಗ
ಬೇ ಡು ವೆ ನು
ಸಞಞ ದ್ಗ ಞ ತಿಯ
ದಂಞಞ ಬಿ
ಕೇ ಞಞ ಞಞ ಞಞ || ||
ಪನಿ ಸಾಸ
ರಿ ರಿ ಸರಿ
ರಿ ನಿ
ನಿ
ಮೆ ರೆ ಯು ತಿ
ಕೊ ಚಾಞಞ ದ್ರಿ
ಗಿ ರಿ ಧಾಞ
ದೊಞ ಳುಞಞ |
ನಿ ರಿ ನಿ ಪಪ
ನಿಸ ರಿ ರಿ
ಸಾ ನಿ
ನಿಸರಿಗಗರಿ
ಕೊಞಲ್ಲೂರು
ಕ್ಷೇಞ ತ್ರ ದೊ ಳು
ನೀ ನೆಞ ಲೆ ಸಿ
ಹೇಞ ಞಞ ಞಞ ಞಞ|| ||
2 ನಿ
2 ರಿಗ ಸಾ ರಿ
ರೀ
2 ಪಾ
ನೆ ಯೆ
ಶಿವ ಕ್ತಿ
ಸ್ವ ರೂ ಳೇ |
ಪನಿ ನಿ ನಿ
ನೀ ನಿ ನಿ
ನಿ
ಸಾ
ಪಿಡಿ ದೆ ನ್ನ    
ನು ದ್ಧ ರಿ ಸಿ
ಸು ತಾ
ಯೇ ||
ನಿ ಪಾ ನಿ
ರಿ ರಿ ಗಾ
2 ರಿ
ನಿಪಾ ನಿರೀ
ನ್ನು
ಪೊ ರೆ ಯು
2 ಕು
ಸಞಲ ಹುತಾ |
ನಿ ರಿ ಗಾ ರಿ
ರಿ ನಿ
ಗಾ ರಿ
ಸಾ
ದಾ ದಿ
ಕ್ತಿ ಯೆ ನಿ ಸಿ
ಮೆ ರೆ ಯು ತ್ತಿ
ಹೇ ||
ನಿ ರಿ ಗಾ ರಿ
ರಿ ನಿ
ಸನಿ
ಗಪನಿ ರಿ ಗಾ ರಿ
ದಾ ದಿ
ಕ್ತಿ ಯೆ ನಿ ಸಿ
ಮೆ ರೆ ಯುಞಞ ತ್ತಿ
ಹೇಞಞಞ || 1 ||
ನಿ
ಪಾ
ರಿ ಸಾ ರಿ
ರಿ
ನ್ನ
ನಾ ಡಿ
ಣ್ಮ ಣಿ
ಯೆ ನಿ ಸಿ |
ನಿ
ನಿ ನಿ ನಿ
ನೀ
ನಿ ಸಾ
ನಿ ನ್ನ ನು
ನು ದಿ
ಪೊ ಳು ತಾ
ಜಿ ಸು ವೇ ||
ನಿ
ರಿ ರಿ ಗಾ
ರಿ ಸಾ
ನಿ ನಿ ರೀ
ಕೆ ದಿ ನಾ
ಧಿ ದೇ
ವಞ ತೆ ಯೇ
ನಿ ರಿ ರಿ
ರಿ ನಿ
ಗಾ ರಿ
ಸಾ
ಬೆ ಗು ತಿ
ಲೆ ನಾಞ
ಮಂಞ ಗಞ ಳೆ
ಯೇ ||
ನಿ ರಿ ರಿ
ರಿ ನಿ
ಸಾ ಸನಿ
ಗಪನಿ ರಿ ಗಾ ರಿ
ಬೆ ಗು ತಿ
ಲೆ ನಾಞ
ಮಂ ಗಞ ಳೆ
ಯೆಞಞಞ || 2 ||
                                                           
S S ಞ ಞ        ರಿ ರಿ ಮೊದಲಾದುವು ಮೇಲಿನ ಸ್ವರಗಳು

ನನ್ನ ತಂದೆ ದಿ| ಸುಂದರರಾಯರು ಇಂದು ನಮ್ಮೊಂದಿಗಿದ್ದಿದ್ದರೆ ಇದೇ 1918 ಮಾರ್ಚ್ 26ಕ್ಕೆ 100 ವರ್ಷ ತುಂಬಿ, ಶತಮಾನೋತ್ಸವ ಆಚರಿಸುತ್ತಿದ್ದೆವು. ಅವರು 1960ರಲ್ಲಿ ಕೊಲ್ಲೂರಿಗೆ ಹೋದಾಗ ಮೂಕಾಂಬಿಕೆಯ ದರ್ಶನದಿಂದ ಪಾವನರಾಗಿ ಬರೆದ ಭಕ್ತಿಗೀತೆಯನ್ನು ಅವರ ಪತ್ನಿ (ನನ್ನ ತಾಯಿ) ಶ್ರೀಮತಿ ರತ್ನಮ್ಮನವರು ರಾಗ ಸಂಯೋಜಿಸಿ ಹಾಡಿ, ನಮಗೂ ಹೇಳಿಕೊಟ್ಟಿದ್ದರು. ಅದಕ್ಕೆ ಶ್ರೀಮತಿ ವಿದುಷಿ ಸರಸ್ವತಿ ರಾವ್ ಅವರು ಸ್ವರ ಪ್ರಸ್ತಾರ ಹಾಕಿ ಕೊಟ್ಟಿದ್ದಾರೆ. ಅವರಿಗೆ ನಾವು ಅಭಾರಿ ಯಾಗಿದ್ದೇವೆ. ಸಹೃದಯ  ಸಂಗೀತ ಪ್ರಿಯರು ಇದನ್ನು ಸುಶ್ರಾವ್ಯವಾಗಿ ಹಾಡಿ, ಪ್ರಚುರ ಪಡಿಸಿ ಮೂಕಾಂಬಿಕೆಯ ಅನುಗ್ರಹಕ್ಕೆ ಪಾತ್ರರಾಗಲಿ, ದಿ ಸುಂದರರಾಯರು ಬರೆದ ಈ ಭಕ್ತಿ ಗೀತೆ ಸಾರ್ಥಕವಾಗಲಿ. ಅವರ ನೆನಪು ಹಾಡಿದವರಲ್ಲಿ, ಕೇಳಿದವರಲ್ಲಿ ಉಳಿಯಲಿ ಎಂಬುದೇ ನಮ್ಮ ಹಾರೈಕೆ.