Friday, October 20, 2017

ನನ್ನ ಕಲೆ ನನ್ನ ಬರಹ - ಮುನ್ನುಗ್ಗಿ ತಿರುಗುವ ಚಕ್ರ

ನನ್ನ ಕಲೆ ನನ್ನ ಬರಹ 

ಮುನ್ನುಗ್ಗಿ ತಿರುಗುವ ಚಕ್ರ 

ಚಕ್ರ ಮುಂದಕ್ಕೆ ಸುತ್ತಿದರೆ ನಾವು ಮುಂದೆ ಸಾಗುತ್ತಿದ್ದೇವೆ ಎಂದರ್ಥ. ಜೀವನದಲ್ಲಿಯೂ ಹೀಗೆ ಅಲ್ಲವೇ. ಇದನ್ನೇ ಜೀವನ ಚಕ್ರ ಎನ್ನಬಹುದು. ಅದು ಯಾವಾಗಲೂ ಮುಂದೆ ಸಾಗುತ್ತಿರಬೇಕು. ಕೆಲವೊಮ್ಮೆ ಹಿಂದಕ್ಕೆ ಸಾಗಿತು ಎಂದರೆ ಅದನ್ನು ನಕಾರಾತ್ಮಕವಾಗಿ ತೆಗೆದುಕೊಳ್ಳದೇ ಅದನ್ನೇ ಉಪಯೋಗಿಸಿಕೊಂಡು ಮುಂದಕ್ಕೆ ಸಾಗಲು ಅನುವು ಮಾಡಿಕೊಳ್ಳಬೇಕು. ಓಟಗಾರರು ಓದುವ ಮುನ್ನ ಕಾಲನ್ನು ಹಿಂದಕ್ಕೆ ತಳ್ಳಿ ಮುಂದೆ ಓಡಲು ಅನುವು ಮಾಡಿಕೊಂಡಹಾಗೆ.
ಈ ಚಿತ್ರದಲ್ಲಿನ ಚಕ್ರ ವನ್ನು ನೋಡಿ. ಅದನ್ನು ಆಳವಾಗಿ ಗಮನಿಸಿದರೆ ಮುಂದೆ ಸಾಗುವ ಹಾಗು ಹಿಂದೆ ಸಾಗುವ ಕುರುಹುಗಳಿವೆ. ಆದರೆ ಹಿನ್ಸೂಚಕ ವನ್ನು ಮುಂದೆ ಸಾಗುವುದರೊಂದಿಗೆ ಜೋಡಿಸಿ ನೋಡಿದರೆ ಎಲ್ಲವೂ ಮುಂದೆ ಸಾಗುತ್ತಿರುವಂತೆ ಕಾಣುತ್ತದೆ. ಜೀವನದಲ್ಲೂ ಹೀಗೇ. ನಕಾರಾತ್ಮಕವನ್ನು ಮರೆತು ಸಕಾರಾತ್ಮಕವಾಗಿ ನೋಡಿದರೆ ಸಾಕು. ಸಾಕಾರವು ಇರಬೇಕೆಂದರೆ ಸ್ವಲ್ಪ ನಕಾರವೂ ಇರಬೇಕು. ಬೇವು ಬೆಲ್ಲವಿದ್ದಂತೆ. ಈ ಚಿತ್ರ ವನ್ನು ಗಮನಿಸಿ ನೋಡಿ, ಇಡಿಯಾಗಿ ನೋಡಿದಾಗ ಅದು ಮುಂದೆ ಸಾಗುತ್ತಿರುವಂತೆ ಸದಾ ತಿರುಗುತ್ತಿರುವಂತೆ ಕಾಣುತ್ತದಲ್ಲೆವೇ?
'ಜೀವನ ಚಕ್ರ'  ಕಲೆ - ಜಗದೀಶ್ 

No comments:

Post a Comment