ನನ್ನ ತಂದೆ ಬ ನ ಸುಂದರ ರಾವ್ ಅವರು - ಜನನ ೧೯೧೮ ಮಾರ್ಚ್ ೨೬, ಮರಣ ೧೯೮೬ ಅಕ್ಟೋಬರ್ ೮ |
ಇಲ್ಲಿರುವ ಪ್ರಸಂಗ ಗಳೆಲ್ಲವೂ ಸುಂದರ ರಾಯರು ಸ್ವತಂತ್ರ ಬರುವುದಕ್ಕೂ ಮುಂಚೆ ಶಾಲೆಗಳ ತನಿಖೆಗೆ ಹೋಗುವಾಗ ನಡೆದದ್ದು ಅಥವಾ ಅವರು ಕೆಲಸಕ್ಕೆ ಸೇರಿದ ಹೊಸದರಲ್ಲಿ ನಡೆದದ್ದು. ಅವರು ಅವೆಲ್ಲವನ್ನೂ ದಾಖಲಿಸಿ ಡೈರಿ ಯಲ್ಲಿ ಬರೆದು ನಂತರ ಅದನ್ನೇ ಸ್ವಾರಸ್ಯವಾಗಿ ಬರೆದು ಪ್ರಕಟಿಸಿದ್ದಾರೆ. ಈ ಪ್ರಸಂಗಗಳು ಅಂದಿನ ಜನಜೀವನವನ್ನು ಬಿಂಬಿಸುತ್ತದೆ. ಇಂದಿಗೂ ಅಂದಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಈ ಬರಹಗಳಲ್ಲಿ ಕಾಣಬಹುದು. ಈ ಕೆಳಗಿನ ಹಾಳೆಯಲ್ಲಿ ಪ್ರಕಟವಾದ ಪ್ರಸಂಗಗಳ ಪಟ್ಟಿಯನ್ನು ಸುಂದರವಾದ ಬರಹದಿಂದ ದಾಖಲಿಸಿರುವುದು ನನ್ನ ಅಮ್ಮ ರತ್ನಮ್ಮ ಸುಂದರರಾವ್.
No comments:
Post a Comment