Saturday, March 27, 2021

Yuga Yugaadi Kaledaru - Da Ra Bendre - song in keyboard - B S Jagadeesha...

Uga Ugadi Kaledaruu - Da Ra Bendre - New year song in Keyboard - B S Jag...



Beda Krisha Ranginata sire nenevudu - Film, Santa Tukaram - In Keyboard ...


ಕಾಮನ ಹಬ್ಬ ಹಾಗೂ ಹೋಳಿ ಹಬ್ಬ 
ಬೇಡ ಕೃಷ್ಣ ರಂಗಿನಾಟ ಎಂಬ ಈ ಹಾಡನ್ನು ನಾನು ಚಿಕ್ಕವನಾಗಿದ್ದಾಗ ನೋಡಿದ್ದು. ಚಿತ್ರ ಸಂತ ತುಕಾರಾಂ. ನನ್ನ ತಾಯಿಯವರು ನನ್ನನ್ನು ಕರೆದುಕೊಂಡು ಹೋಗಿದ್ದರು, ಚಿತ್ರದ ಕೆಲವು ಭಾಗಗಳು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದರೆ ಆ ಸಿನೆಮಾದ ಹಾಡುಗಳನ್ನು ಕೇಳಿದಾಗ ಹಳೆಯ ನೆನಪು ಕಾಡುತ್ತದೆ. 
ಇಲ್ಲಿ ಮೇಲೆ ನಾನು ಕೀಬೋರ್ಡ್ ನಲ್ಲಿ ನುಡಿಸಿರುವ ಹಾಡು "ಬೇಡ ಕೃಷ್ಣ ರಂಗಿನಾಟ" ಎಂಬ ಹಾಡು. ಚಿತ್ರದಲ್ಲಿ ಅದು ಎಲ್ಲಿ ಬರುತ್ತದೋ ಮರೆತು ಹೋಗಿದೆ. ಆದರೆ, ಅದರಲ್ಲಿ "ಟೂಯ್ " ಎಂದು ಬಣ್ಣವನ್ನು ಎರಚುವ ದೃಶ್ಯ ನೆನಪಿನಲ್ಲಿ ಹಾಗೆ ಉಳಿದಿದೆ. ಆ ಹಾಡು ಸಹ ಮಧುರವಾದ ರಾಗದಲ್ಲಿರುವುದರಿಂದ ಗುನುಗುನಿಸುವಂತಿದೆ. ವಿಜಯಭಾಸ್ಕರ್ ಅವರ ಸಂಗೀತ, ಜಾನಕಿ ಅವರ ಗಾಯನ  ಮರೆಯಲು ಸಾಧ್ಯವೇ?  ಹೋಳಿ ಹಬ್ಬದ ದಿನ ಈ ಹಾಡು ಸಾಮಾನ್ಯವಾಗಿ ಪ್ರಸಾರವಾಗುತ್ತಿತ್ತು. 
ಹೋಳಿ ಹಬ್ಬ ಎಂದ ಕೂಡಲೇ ನನಗೆ ನನ್ನ ಚಿಕ್ಕಂದಿನ ದಿನಗಳ ನೆನಪಾಗುತ್ತದೆ. ನಾನು ಬೆಂಗಳೂರಿಗ ಅದರಲ್ಲೂ ಜಯನಗರಿಗ ಎಂದರೆ ತಪ್ಪಿಲ್ಲ. ನಾವು ಜಯನಗರಕ್ಕೆ ಬಂದದ್ದು ನನಗೆ ಸುಮಾರು ೪ ವರ್ಷ ಆಗಿದ್ದಾಗ. ಆಗಿನಿಂದ ಇಲ್ಲೇ ಇದ್ದೇನೆ. ಅಂದರೆ ನಾನು ಸುಮಾರು ೬೦ ವರ್ಷದಿಂದ ಜಯನಗರದಲ್ಲೇ ಇದ್ದೇನೆ.
ಬೆಂಗಳೂರು ಕಡೆ ಹೋಳಿ ಹಬ್ಬ ಅಂದರೆ ಅಷ್ಟೊಂದು ಭಾರಿಯಾಗಿ ಆಚರಿಸುತ್ತಿರಲಿಲ್ಲ. ಅದನ್ನು ಇಲ್ಲಿ ಕಾಮನ ಹಬ್ಬ ಎಂದು ಕರೆಯುತ್ತಿದ್ದರು. ಈಗ ಇಲ್ಲಿ ದೇಶದ ಇತರ ಭಾಗದ ಜನರೂ ಬಂದು ಸೇರಿರುವುದರಿಂದ ಹಬ್ಬದ ಆಚರಣೆ ಅಂದಿಗೂ ಇಂದಿಗೂ ಅಜಗಜಾಂತರ. ನಾನು ಹಳೆಯ ನೆನಪನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇನೆ.
ಆಗ ನಮ್ಮ ಕಡೆ ಹೋಳಿ ಹಬ್ಬವನ್ನು ಕಾಮನ ಹಬ್ಬ ಎಂದು ಕರೆಯುತ್ತಿದ್ದರು. ಅದರ ಆಚರಣೆ ಎಂದರೆ ಒಂದು ರೀತಿಯ ಯುವಕರ ದರ್ಪದ, ಅಟ್ಟಹಾಸದ ಹಬ್ಬವಾಗಿತ್ತು. ಆಗ ದೊಡ್ಡ ವಯಸ್ಸಿನ ಹುಡುಗರು ಯಾರೆಂದು ಗುರುತು ಹಿಡಿಯಲಾಗದಂತೆ ಮುಖಕ್ಕೆಲ್ಲ ಬಣ್ಣ ಬಳಿದುಕೊಂಡು ಗುಂಪು ಗುಂಪಾಗಿ ಮನೆ ಮನೆಗೆ ಹೋಗಿ ಒಂದು ಹುಂಡಿಯನ್ನು ಕುಲುಕಿಸುತ್ತಾ ದುಡ್ಡು ಕೇಳುತ್ತಿದ್ದರು. ಜೊತೆಗೆ ಎಲ್ಲರೂ "ಕಾಮಣ್ಣ ಕಟ್ಟಿಗೆ, ಭೀಮಣ್ಣ ಬೆರಣಿ" ಎಂದು ಒಂದು ಹಾಡನ್ನು ಹೇಳುತ್ತಾ ಮನೆಗಳಲ್ಲಿದ್ದ ಸೌದೆ, ಮರದ ತುಂಡು ಎಲ್ಲವನ್ನು ಹೇಳದೆ ಕೇಳದೆ ಕಿತ್ತುಕೊಂಡು ಹೋಗುತ್ತಿದ್ದರು. ತುಂಬಾ ಮಾತನಾಡಿದರೆ ಮುಖಕ್ಕೆ, ಮೈಗೆ ಬಣ್ಣವನ್ನು ಎರಚಿ ಬಿಡುತ್ತಿದ್ದರು. ಆಗ ಬೆಂಗಳೂರು ಇನ್ನೂ ಸೌದೆ, ಇದ್ದಿಲು ಗಳ ಕಾಲದಲ್ಲಿತ್ತು. ಅಲ್ಲಿ ಇಲ್ಲಿ ಸೀಮೆ ಎಣ್ಣೆ ಒಲೆ, ಕೆಲವರ ಮನೆಯಲ್ಲಿ ವಿದ್ಯುತ್ ಕಾಯಿಲ್ ಒಲೆಗಳಿದ್ದವು.
ಹೀಗಾಗಿ ಎಲ್ಲರ ಮನೆಯಲ್ಲೂ ಸುಡಲು ಸೌದೆ, ಕಟ್ಟಿಗೆಗಳು ಹೇರಳವಾಗಿ ಸಿಗುತ್ತಿದ್ದವು. ಜನರೂ ಸಹ ಮಧ್ಯಮ ಅಥವಾ ಕೆಳ ಮಧ್ಯಮ ವರ್ಗದವರು. ಅದಕ್ಕಿಂತ, ಸರಳ ಜೀವಿಗಳು ಎಂದು ಹೇಳಬಹುದು. ಕಾಮನ ಹಬ್ಬ ಬರುತ್ತಿದ್ದಂತೆ ಮನೆಯಲ್ಲಿ ಹಿತ್ತಲಲ್ಲಿ ಇದ್ದ ಎಲ್ಲ ಸೌದೆ ಕಟ್ಟಿಗೆಗಳನ್ನು ಒಳಗೆ ಸೇರಿಸಿಬಿಡುತ್ತಿದ್ದರು.
ಈ ಕಾಮನ ಹಬ್ಬ ಆಚರಿಸುತ್ತಿದ್ದ ಬಿಸಿ ರಕ್ತದ ಯುವಕರ ತಂಡವು ಬೀದಿಯಲ್ಲಿ ಓಡಾಡುವ ಜನರಿಗೂ ಕಾಟ ಕೊಡುತ್ತಿದ್ದರು. ಅವರು ದುಡ್ಡು ಕೊಡಬೇಕು ಇಲ್ಲವಾದಲ್ಲಿ ಧರಿಸಿದ್ದ ಬಟ್ಟೆಗೆ ಗುಲಾಲ್ ನ ಅಭಿಷೇಕ ಶತಸಿದ್ಧವಾಗಿರುತ್ತಿತ್ತು. ಅನೇಕರು ಅವರಿಂದ ತಪ್ಪಿಸಿಕೊಂಡು ಒಡಲು ನೋಡುತ್ತಿದ್ದರು, ಕೆಲವರು ಸಿಕ್ಕಿ ಬೀಳುತ್ತಿದ್ದರು. ಇದೆಲ್ಲವನ್ನೂ ನಾವು ಕಿಟಕಿಯಿಂದ ಇಣುಕಿ ನೋಡುತ್ತಿದ್ದವು. ಆ ಯುವಕರ ಬಣ್ಣ ಬಳಿದ ಮುಖ, ವಿಚಿತ್ರ ಬಣ್ಣಗಳ ಬಟ್ಟೆ ಇವು ನಮಗೆ ಒಂದು ರೀತಿಯ ಭಯವನ್ನು ಹುಟ್ಟಿಸುತ್ತಿದ್ದವು. ಕೆಲವರಿಗೆ ತಮ್ಮೊಳಗೆ ಹುದುಗಿದ್ದ ಕರಾಳ ಮುಖವನ್ನು ತೋರಿಸಿಕೊಳ್ಳಲು ಇದು ಸಕಾಲವಾಗಿತ್ತು. ಕೆಲವರಿಗೆ ಸೇಡು ತೀರಿಸಿಕೊಳ್ಳಲು ಇದು ಸುಸಮಯಾಗಿತ್ತು. ದೊಡ್ಡವರಿಗೆ ಇದು ಅಷ್ಟು ಭಯಾನಕ ಅನಿಸದಿದ್ದರೂ ನಮಗೆ ಭಯವೋ ಭಯ. ಹೆಣ್ಣು ಮಕ್ಕಳಂತೂ ಮನೆಯಿಂದ ಹೊರಗೇ ಹೋಗುತ್ತಿರಲಿಲ್ಲ.
ಅಂದು ಸಂಜೆ ಒಂದು ಬಯಲಲ್ಲಿ ಸಂಗ್ರಹಿಸಿದ್ದ ಎಲ್ಲಾ ಕಟ್ಟಿಗೆಗಳನ್ನೂ ಎತ್ತರಕ್ಕೆ ಪೇರಿಸಿ ಸುಡುತ್ತಿದ್ದರು. ಆಗ ಜಯನಗರವೆಲ್ಲಾ ಬಯಲು ಬಯಲಾಗಿದ್ದುರಿಂದ ನಾವು ಮನೆಯಲ್ಲೇ ಕುಳಿತುಕೊಂಡೆ ಕಾಮ ದಹನವನ್ನು ನೋಡುತ್ತಿದ್ದೆವು. ಆಗ ಯಾರಿಗೂ ಕಾಮನ ಹಬ್ಬ ಏಕೆ ಆಚರಿಸುತ್ತಾರೆ, ಕಾಮ ದಹನ ಎಂದರೇನು ಎಂದು ತಿಳಿದುಕೊಳ್ಳುವುದಕ್ಕಿಂತ, ನಿರ್ಭಿತರಾಗಿ ಲಂಗು ಲಗಾಮಿಲ್ಲದೆ ತಮಗೆ ಬೇಕಾದಂತೆ ವರ್ತಿಸಬಹುದಾದ ದಿನ ಎಂಬುದು ಮುಖ್ಯವಾಗಿತ್ತು. ಹೀಗಾಗಿ ಬೆಂಗಳೂರಿಗರಿಗೆ ಕಾಮನ ಹಬ್ಬ ಎಂದರೆ ಹಬ್ಬಕ್ಕಿಂತ ಇದು ವಕ್ಕರಿಸಿದೆಯೆಲ್ಲ, ಹೇಗೆ ನಿಭಾಯಿಸುವುದು ಎಂಬುದು ಚಿಂತೆಯಾಗಿತ್ತು. ಆಗ ಎಲ್ಲರ ಮನೆಯಲ್ಲೂ ಹೆಚ್ಚು ಬಟ್ಟೆಗಳು ಇರುತ್ತಿರಲಿಲ್ಲ, ಬಟ್ಟೆಗೆ ಬಣ್ಣ ಅಂಟಿತೆಂದರೆ ಅದನ್ನು ಒಗೆಯಬೇಕು, ಬೇರೆ ಬಟ್ಟೆ ಧರಿಸಬೇಕು, ಅದೂ ಬಣ್ಣವಾದರೆ ಎಂದು ಏನೇನೋ ಚಿಂತೆಗಳು. ಇದು ಬೆಂಗಳೂರಿನ ಕಾಮನ ಹಬ್ಬದ ನೆನಪು.
ಈಗ ಕಾಲ ಬದಲಾಗಿದೆ. ಯಾರೂ ಬಲವಂತವಾಗಿ ಬಣ್ಣ ಹಾಕುವುದಿಲ್ಲ. ತಮ್ಮ ಮನೆಗಳಲ್ಲೇ ಆಚರಿಸಿಕೊಳ್ಳುತ್ತಾರೆ. ಇದನ್ನು ಹೋಳಿ ಹಬ್ಬ ಎಂದು ಕರೆಯುತ್ತಾರೆ. ಜನ ತಾವಾಗಿಯೇ ಸುಡಲು ತಮ್ಮ ಬಳಿ ಇರುವ ಬೇಡದ ವಸ್ತುಗಳನ್ನು ನೀಡುತ್ತಾರೆ. ಶ್ರೀ ಸಾಮಾನ್ಯರಿಗೆ ಯಾರೂ ತೊಂದರೆ ಮಾಡುವುದಿಲ್ಲ. ತಮ್ಮದೇ ಆದ ಗುಂಪಿನಲ್ಲಿ ಹುಡುಗರು ಹುಡುಗಿಯರು ಬಣ್ಣ ಎರಚಿಕೊಂಡು ಆನಂದಿಸುತ್ತಾರೆ. ಜನರೂ ಮೇಲ್ಮಧ್ಯಮ ಹಾಗೂ ಸಿರಿವಂತರಾಗಿದ್ದಾರೆ. ಸರಳ ಜೀವನಕ್ಕಿಂತ ಆಡಂಬರದ ಜೀವನಕ್ಕೆ ಒತ್ತು ಕೊಡುತ್ತಾರೆ. ದೇಶದ ಇತರ ಭಾಗಗಳ ಜನರ ಮಿಲನದಿಂದ ಹೋಳಿ ಹಬ್ಬದ ಆಚರಣೆಯೇ ಬದಲಾಗಿ ಹೋಗಿದೆ.
ನಮ್ಮ ಜೀವನವೂ ವರ್ಣಮಯವಾಗಿರಲಿ, ಒಳ್ಳೆಯದು ನಮ್ಮಲ್ಲಿಯೇ ಉಳಿದು ಬೇಡದ್ದು ದಹನವಾಗಲಿ . ಎಲ್ಲರಿಗೂ ಹೋಳಿಹಬ್ಬದ ಶುಭಾಶಯಗಳು.





Uga Ugadi Kaledaruu - Da Ra Bendre - New year song in Keyboard - B S Jag...



Monday, March 22, 2021

Kadu malligeyondu ಕಾಡು ಮಲ್ಲಿಗೆಯೊಂದು - Bhava Geethe in Keyboard - B S Jag...



ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರಾರೆಂದು ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲ ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ ಯಾವ ಪಾಪಕೆ ನನ್ನ ಇಂತು ಎಸೆದೆ //ಕಾಡು// ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ ಮುಡಿಯನೇರುವ ದಾರಿ ನಾ ಕಾಣಲಿಲ್ಲ ಕನವರಿಸಿ ಕೇಳುತಿಹೆ ಕರುಣೆ ತೋರೆಂದು ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು //ಕಾಡು//

Ivana Pidakondu Pogelo Jogi - Purandaradasaru - devotional song in keybo...

Saturday, March 20, 2021

Nammoora Yuvarani - K J Yesudas - In keyboard B S Jagadeesha Chandra




ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ

ಶುಭಕೋರಿ ಹಾಡೋಣ ಬಾ ಕೋಗಿಲೆ

ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು //2//


ಒಳ್ಳೆ ದಿನ ಘಳಿಗೆಯ ಕೂಡಿಸಿ     ತೆಂಗು ಬಾಳೆ ಚಪ್ಪರವ ಹಾಕಿಸಿ

ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ

ಸರಿಗಮ ಪಧನಿಸ ಊದಿಸಿ          ತರತರ ಅಡಿಗೆಯ ಮಾಡಿಸಿ

ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ //


ನಿಜವಾಗಿ ನನಗೇನು ತೋಚದೆ     ಹೇಳಮ್ಮ ನೀನೆಂದು ಕೇಳಿದೆ

ಮನಸೊಂದೆ ಸಾಕಂತೆ ಸಾಕ್ಷಿಗೆ     ಅರಿಶಿಣವೆ ಬೇಕಂತೆ ತಾಳಿಗೆ

ಹೇಳಿದ್ದು ಸತ್ಯ   ಕೇಳಿದ್ದು ಸತ್ಯ     ಸುಳ್ಯಾವುದೆ ಕೋಗಿಲೆ

ಮಾಂಗಲ್ಯದಿಂದ ನಂಟಾದರು    ಮನ ಸೆರೊ ಮದುವೇನೆ ಸುಖವೆಂದರು

//ನಮ್ಮೂರ //

ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ

ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ

ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ

ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ //


ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ

ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ

ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ

ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು

//ನಮ್ಮೂರ //