ಭಕ್ತನ ಭಜನೆ - - ಜಗದೀಶ ಚಂದ್ರ ಬಿ ಎಸ್
ಸ್ವರಗಳ ಜ್ಞಾನ ನನಗಿಲ್ಲಾ
ರಾಗದ ಪರಿಚಯ ಎನಗಿಲ್ಲಾ
ಭಜಿಪುದು ಬಿಟ್ಟರೆ ಬೇರಿಲ್ಲಾ
ನಿನ್ನ ನಾಮದ ಸ್ಮರಣೆಯೆ ನನಗೆಲ್ಲಾ
ಭಜನೆ ಮಹತ್ವವು ಎಷ್ಟಿದೆ ಏನೋ
ಸ್ವಲ್ಪವು ನನಗೆ ಅರಿವಿಲ್ಲ
ಭಕ್ತಿಯ ತುಂಬಿದ ಹಾಡಲ್ಲಿರುವ
ನಾಮದ ಸ್ಮರಣೆಯೆ ಸಾಕೆನಗೆ
ಭಕ್ತಿಯ ಭಜನೆಯೆ ಸಾಕೆನಗೆ
ದೇವನು ಎಲ್ಲರ ಸಲಹುವುದಾದರೆ
ಭಜನೆಯು ಏತಕೆ ಎನ್ನುವರು
ತಂದೆಯ ಸ್ಥಾನದಿ ನೀನಿರುವಾಗ
ಇವುಗಳ ಗೊಡವೆಯು ನನಗೇಕೆ
ಭಜನೆಯೆ ಒಡವೆ ಉಡುಗೊರೆಯು ಹಿಂದಿ ಭಜನೆಯ ಭಾವಾನುವಾದ - ಭಜನೆಯ ಮೂಲ ರಚನಕಾರ ಹೆಸರು ತಿಳಿದು ಬಂದಿಲ್ಲ.
No comments:
Post a Comment