Wednesday, June 2, 2021

"ಏಕೋ ಏಕೋ ಏತಕೋ" - ಒಂದೇ ಬಳ್ಳಿಯ ಹೂವುಗಳು


ಈ ಹಾಡು ನನ್ನ ಬಾಲ್ಯದ ದಿನಗಳನ್ನು ನೆನಪಿಸುತ್ತದೆ. ಒಂದೇ ಬಳ್ಳಿಯ ಹೂವುಗಳು ಎಂಬುದು ಚಿತ್ರದ ಹೆಸರು. ೧೯೬೭ ರಲ್ಲಿ ಬಿಡುಗಡೆಯಾಗಿತ್ತು.  ಇದನ್ನು ನಾವು ಜಯನಗರದ ಶಾಂತಿ ಚಿತ್ರಮಂದಿರದಲ್ಲಿ ನೋಡಿದ್ದೆವು. ನನ್ನ ಅಕ್ಕಂದಿರು ನನ್ನನ್ನು ಈ ಚಿತ್ರಕ್ಕೆ ಕರೆದುಕೊಂಡು ಹೋಗಿದ್ದರು. "ಏಕೋ ಏಕೋ ಏತಕೋ" ಎಂಬ ಈ ಹಾಡು ಮುಗಿಯುತ್ತಿದ್ದ ಹಾಗೆ ನಾಯಕಿ ಉಯ್ಯಾಲೆಯಿಂದ ಬಿದ್ದು ಕಣ್ಣನ್ನು ಕಳೆದುಕೊಂಡು ಬಿಡುತ್ತಾಳೆ. ಬಿ ಕೆ ಸುಮಿತ್ರಾ ಅವರು ಸಂಗಡಿಗರೊಂದಿಗೆ ಬಹಳ ಮಧುರವಾಗಿ ಹಾಡಿದ್ದಾರೆ. 
ಸತ್ಯಂ ಅವರ ಸಂಗೀತದ ಎಲ್ಲಾ ಹಾಡುಗಳೂ ಚೆನ್ನಾಗಿವೆ. ಕನ್ನಡ ಚಿತ್ರದಲ್ಲಿ ಮೊಹಮದ್ ರಫಿ ಮೊದಲ ಬಾರಿಗೆ ಹಾಡಿದ್ದು ಇದರ ಹೆಗ್ಗಳಿಕೆ. ಇದರಲ್ಲೇ ಏಸುದಾಸ್ ಅವರೂ "ದಾರಿ ಕಾಣದೆ ಬಂದವಳೇ" ಎಂಬ ಹಾಡನ್ನು ಎಸ್ ಜಾನಕಿ ಅವರೊಂದಿಗೆ ಹಾಡಿದ್ದಾರೆ. ಕನ್ನಡದಲ್ಲಿ ಇದು ಅವರ ಮೊದಲ ಹಾಡು. 
ಆಗ ನನಗೆ ಚಿತ್ರ ಅದೆಷ್ಟು ಅರ್ಥವಾಯಿತೋ ಗೊತ್ತಿಲ್ಲ. ಆದರೆ ಚಿತ್ರ ನೋಡಿ ಅತ್ತಿದ್ದಂತೂ ನಿಜ. ಹಾಡುಗಳೂ ಚೆನ್ನಾಗಿ ನೆನಪಿವೆ. ಇದಕ್ಕೆ ಆಕಾಶವಾಣಿಯು ಕಾರಣ. ರೇಡಿಯೋದಲ್ಲಿ ಈ ಹಾಡುಗಳು ಆಗಾಗ ಪ್ರಸಾರವಾಗುತ್ತಿದ್ದವು. 


+2 Ma Ballad1D spd100 vol35 P5 St 20 g3

No comments:

Post a Comment